ಬದಲಾವಣೆ

‘Selifie’ ಎನ್ನುವ ಪದದ ಹುಟ್ಟಿನಿಂದ ಈವರೆಗಿನ ಬೆಳವಣಿಗೆಯನ್ನು ನೋಡುತ್ತಾ ಬಂದಿರುವ ನಾನು ಮೊದಲಿಗೆ ಈ ಪದ ಬಳಕೆಯಲ್ಲಿ ಬಂದಾಗ ಇದು self assesment, self review (ಆತ್ಮಾಭಿಲೋಕನ, ಸ್ವವಿಮರ್ಶೆ) ನಂತೆ ಮನುಷ್ಯನ ಅಂತರಂಗಕ್ಕೆ ಸಂಬಂದಿಸಿದ ಏನೋ ಪದ ಇರಬಹುದು ಎನ್ನುವ ಕಲ್ಪನೆಯವಳಾಗಿದ್ದೆ. ಯಾವಾಗ ಇದನ್ನು ಯರ್ರಾ ಬಿರ್ರಿಯಾಗಿ ಪ್ರತಿಯೊಬ್ಬರು ಉಪಯೋಗಿಸಲು ಪ್ರಾರಂಭಿಸಿದರೊ ಅವಾಗ ಅನಿವಾರ್ಯವಾಗಿ ಗೂಗಲಿಸಿ ಇದರ ನಿಜ ಅರ್ಥ ತಿಳಿದುಕೊಂಡೆ.

ಮೊಬೈಲ್ ಖರೀದಿಸುವಾಗ ಸೆಲ್ಫಿ ಕ್ಯಾಮೆರಾ ಒಳ್ಳೆಯದಿರುವುದನ್ನೇ ಖರೀದಿಸಿದರೂ ನಂತರ ಯಾವ್ಯಾವುದೋ (perfect ಸೆಲ್ಫಿ ತೆಗಿಯುವ ಕಲೆ ಸಿದ್ದುಸಿಕೊಳ್ಳಲಾಗದೆ) ಕಾರಣಕ್ಕೆ ಹೆಚ್ಚು ಉಪಯೋಗಿಸದೆ ಅದೆಲ್ಲ ನಮಗೆ ಹೇಳಿಸಿದಲ್ಲ ಬಿಡಿ ಅನ್ನುವವಳು ನಾನು. ಹೀಗೆ ಲೇಟೆಸ್ಟ್ ಟ್ರೆಂಡ್ ನೊಂದಿಗೆ ಹಾಗೋ ಹೀಗೊ ಸುಧಾರಿಸಿಕೊಂಡು ಮುಂದುವರಿಯುತ್ತಿರುವಾಗ ಮೊನ್ನೆ contacts ನಲ್ಲಿ ಇದ್ದ(?) ಒಬ್ಬರು ನಿಮಿಷಕ್ಕೊಂದರಂತೆ ಸೆಲ್ಫಿ ಕ್ಲಿಕ್ಕಿಸಿ status upload ಮಾಡುತ್ತಿರಬೇಕಾದರೆ ಯಾಕಿರಬಹುದು ಎನ್ನುವ ಕುತೂಹಲದಿಂದ ‘hi’ ಎಂದು ಒಂದು message ಅವರ inbox ಗೆ ಹಾಯಿಸಿದೆ. ಯಾಕ್ರೀ ಈ ಥರ ಸೆಲ್ಫಿ upload ಮಾಡಿ ಹಿಂಸೆ ಕೊಡುತ್ತಿದಿರಿ ಎನ್ನುವುದನ್ನು ಅವರ ಮನ ನೋಯಿಸದ ರೀತಿಯಲ್ಲಿ ಕೇಳಲು, ಆಚೆ ಕಡೆಯಿಂದ ‘ma lyf ma rulzzz’ ಎನ್ನುವ ಏನೋ ಅಸಂಭದ್ದ ಬಂದು ನನ್ನ inbox ಗೆ ಅಪ್ಪಳಿಸಿತು. ಇದನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಿ ಅನಕ್ಷರಸ್ಥಳಂತೆ ಒಂದು ಹೆಬ್ಬೆಟ್ಟು(👍) ಒತ್ತಿ ಸುಮ್ಮನಾದೆ.

ಇದಾದಮೇಲೆ ಲೇಟೆಸ್ಟ್ ಟ್ರೆಂಡ್ ಬಗ್ಗೆ ಮಾತಾಡುವಾಗ ನನ್ನ ಎಚ್ಚರಿಕೆಯಲ್ಲಿ ನಾನಿರಬೇಕೆಂದು ನಿರ್ಧರಿಸಿದೆ. ಇನ್ನೊಂದು ದಿನ ಎಳೆಯ ಸ್ನೇಹಿತರೊಬ್ಬರಲ್ಲಿ(ಹದಿಹರೆಯದ ಮಕ್ಕಳನ್ನು ಸ್ನೇಹಿತರರಂತೆ ಕಾಣಬೇಕು ಎನ್ನುವ ಮಾತಿದೆ. Kindergarten ಗೇ graduation ಡೇ ಇರುವ ಈ ಕಾಲದಲ್ಲಿ ಎಲ್ಲರನ್ನು ಸ್ನೇಹಿತರಂತೆ ಪರಿಗಣಿಸುವುದರಲ್ಲಿ ತಪ್ಪೇನಿಲ್ಲ) ಲೇಟೆಸ್ಟ್ ಟ್ರೆಂಡ್ ನ ಸುದ್ದಿ ಬೇಡ ಎಂದು, ದೇವತೆಗಳು ಮನಸ್ಸಿನಲ್ಲೇ ಒಬ್ಬರನ್ನೊಬ್ಬರು ಮಾತನಾಡಿಸುತ್ತಿದ್ದರು. ಯೋಗ ಧ್ಯಾನ ಮಾಡಿ ಅವರಲ್ಲಿ ಅಷ್ಟೆಲ್ಲ ಶಕ್ತಿ ಇದ್ದಿತ್ತು ಗೊತ್ತಾ ಎಂದು ನನ್ನ ಪುರಾಣಗಳ ಅಲ್ಪ ಸ್ವಲ್ಪ ಜ್ಞಾನ ಬಿಚ್ಚಿಡಲು ಪ್ರಾರಂಭಿಸಿದೆ. ನನ್ನ ಎಲ್ಲ ಪುರಾಣ ವನ್ನು ಕೇಳಿದ ನನ್ನ ಎಳೆಯ ಸ್ನೇಹಿತರು ದೇವತೆಗಳು ತಮ್ಮ ಉದ್ದನೆಯ ಕೂದಲು ಹಾಗೂ ದೊಡ್ಡ ಕಿರೀಟದ ಅಡಿ ಆ ಪಕ್ಕದ್ಮನೆ uncle ಉಪಯೋಗಿಸುವ bluetooth headset ಇಟ್ಟುಕೊಳ್ಳುತ್ತಿರಲಿಲ್ಲಎಂದು ಹೇಗೆ ಹೇಳುತ್ತೀರಿ ಅಂದು ಬಿಟ್ಟ! ಬದಲಾಗುತ್ತಿರುವ ತಂತ್ರಜ್ಞಾನ ಹಾಗೂ ಬದಲಾಗುತ್ತಿರುವ ವಿಚಾರಧಾರೆ ಇಂದ ಮುಂದೊಮ್ಮೆ ಪುರಣಗಳಿಗೂ ತಿದ್ದುಪಡಿ ತರಬೇಕಾಗಬಹುದೋ ಎಂದು ನಾನು ತಲೆ ಕೆರೆದುಕೊಂಡೆ. 🙆

ಓಟು

ತರಕಾರಿ ಹೆಚ್ಚ್ ತಿರಬೇಕಾದ್ರೆ ತಪ್ಪಿ ಗಾಯ ಆಗಿ ರಕ್ತ ಉಚ್ಕೊಂಡ್ ಬಂದು ತಲೆ ತಿರುಗಿ ಹುಚ್ಚು ಹಿಡಿದಂಗಾಗಿ ಅಯ್ಯೋ ದೇವರೇ ಎಲ್ಲಿದ್ದಿಯಪ್ಪ ಅಂದ್ರೆ ಅವನೇನು ಇಲ್ಲಿದಿನಪ್ಪ ಹೇಳಲಿಕ್ಕೆ election ಟೈಂ ಅಲ್ಲಿ ಕೆಳಗಿಳಿದು ಜನರ ಮದ್ಯ ಬರಲ್ಲ ಬಿಡಿ. ತದನಂತರ ಸ್ವಲ್ಪ ಸುಧಾರಿಸಿಕೊಂಡು ಡಾಕ್ಟರ್ ಕ್ಲಿನಿಕ್ ಗೆ ಹೊರಟರೆ ಗೇಟು ಬಳಿ ಇದ್ದ building ನ ಚೌಕಿದಾರ ಹೋ ಎನ್ ಮೇಡಮ್ ಎಲ್ಲಿಗ್ ಹೊರಟಿರಿ ಎಂದನು. ಡಾಕ್ಟರ್ ಬಳಿ ಎಂದಾಗ ಓಹ್ ನೀವೂ tiktok ಸಂತ್ರಸ್ತರೋ? ಎನ್ನಲು ಇಲ್ಲಪ್ಪ ನಾಳೆ ಓಟು ಹಾಕಿ ಇಂಕ್ ಮಾರ್ಕ್ ಹಾಕಿಸಿಕೊಳ್ಳಬೇಕಾದ ಬೆರಳಿಗೆ ಗಾಯ ಆಯ್ತು. ಓಟಿಗಿಂತ ಇಂಕ್ ಮಾರ್ಕ್ ಗೆ ಜಾಸ್ತಿ ಬೆಲೆ ಇದೆ. ಇಡೀ ದಿನ ರಜೆ ಇರುವುದರಿಂದ ಬೆಳಿಗ್ಗೆನೇ ಓಟು ಹಾಕಿ ರಾತ್ರಿ ವರೆಗೆ ಇಂಕ್ ಮಾರ್ಕ್ ತೋರಿಸಿ 10-50% off ಇರುವ ಎಲ್ಲ ಅಂಗಡಿಗೆ ಹೋಗುವ ಪ್ಲಾನ್ ನಲ್ಲಿದ್ದೆ. ಹಾಗಾಗಿ ಡಾಕ್ಟರ್ ಬಳಿ ತೋರಿಸಿ ಬರೋಣ ಅಂತ ಹೊರಟೆ ಅಂದೆ.

ನಗು ಹಾಗೂ ಮತದಾನಕ್ಕೆ ಜಾತಿ ಮತ ಪಕ್ಷ ಭೇದವಿಲ್ಲ. ಎಲ್ಲ ಪಕ್ಷ ಗಳ ಮತದಾನ ಪ್ರಚಾರದ ಕಚ್ಚಾಟ ಹುಚ್ಚಾಟ ಗಳನ್ನು ನೋಡಿ ಈವರೆಗೆ ನಕ್ಕಾಗಿದೆ ನಾಳೆ ಎಲ್ಲರೂ ತಪ್ಪದೆ ಮತದಾನ ಮಾಡಿ. Happy voting!

P.S- ಈ ಲೇಖನದಲ್ಲಿ ಬರುವ ಎಲ್ಲ ಡೈಲಾಗು ಗಳು ಕಾಲ್ಪನಿಕ😛 ನಿಜ ಜೀವನದೊಂದಿಗೆ ಸಾಮ್ಯತೆ ಕಂಡು ಬಂದರೆ ಸುಮ್ಮನೆ ನಕ್ಕು ಬಿಡಿ.

ಬಕಾಸುರ

ನಮ್ಮೂರಿನಲ್ಲಿ ಗಣೇಶ ಚತುರ್ಥಿಯಾಗಿ ಮೂರನೇ ದಿನಕ್ಕೆ ಸಾರ್ವಜನಿಕ ಗಣೇಶೋತ್ಸವದ ಗಣಪತಿಯನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ ದೇವಸ್ಥಾನದ ಕೆರೆಯಲ್ಲಿ ವಿಸರ್ಜಿಸುತ್ತಾರೆ. ಚಿಕ್ಕವರಿದ್ದಾಗ ಇದೊಂದು ಬಹಳ ಸಂಭ್ರಮದ ದಿನವಾಗಿತ್ತು ನಮಗೆಲ್ಲ. ಈ ದಿನ ಶಾಲೆಗೆ ರಜೆ ಇಲ್ಲವಾದರೂ ಮೆರವಣಿಗೆ ಇರುವುದರಿಂದ ಬೇಗನೆ ಶಾಲೆಯಿಂದ ಮನೆಗೆ ಬರಬಹುದಾಗಿತ್ತು. ಆದರೂ ಸಾಲು ಸಾಲು ರಜೆಯ ನಂತರ ಇಂತಹ ಸಂಭ್ರಮದ ನಡುವೆ ಶಾಲೆಗೆ ಹೋಗಲು ನಾವೆಲ್ಲ ಸ್ವಾಭಾವಿಕವಾಗಿ ಹಿಂದೇಟು ಹಾಕುತ್ತ ಕಾರಣ ಹುಡುಕುತಿದ್ದೆವು.

ಹೀಗೆ ಈ ಗಣಪತಿ ವಿಸರ್ಜನೆಯ ದಿನ ಸುಮಾರು ಜನ ಬಗೆಬಗೆಯ ವೇಷ ಹಾಕಿ ಮನೆ ಮನೆಗೆ ಬರುತ್ತಿದ್ದರು. ಪೋಸ್ಟ್ ಮ್ಯಾನ್, ರಾಕ್ಷಸ, ಬಕಾಸುರ, ಹುಡುಗಿ, ಶಾಲೆಗೆ ಹೋಗುವ ಹುಡುಗ ಹೀಗೆ ಬೇರೆ ಬೇರೆ ವೇಷಧಾರಿಗಳು ಆ ದಿನವಿಡೀ ತಿರುಗಾಡುತ್ತ, ಎಲ್ಲರ ಹತ್ತಿರ ದುಡ್ಡು ಕೀಳುತ್ತ, ಮಕ್ಕಳನ್ನು ಕಂಡರೆ ಮೃದುವಾಗಿ ಗದರಿಸುತ್ತಿರುತಿದ್ದರು. ಒಂದು ಸಲ ನಾನು ಹೀಗೆ ಒಲ್ಲದ ಮನಸ್ಸಿನಿಂದ ಶಾಲೆಗೆ ಹೊರಟಿದ್ದಾಗ ಮನೆಯ ಓಣಿಯ ತಿರುವಿನಲ್ಲಿ ಧುತ್ತನೆ ಎದುರಾದ ಬಕಾಸುರ ನನ್ನನ್ನು ಕಂಡವನೆ ತನ್ನ talent ಪ್ರದರ್ಶಿಸಲು ‘ಹ್ಹ ಹ್ಹ ಹ್ಹ ಬಕಾಸುರಾ’ ಎಂದು ಗಟ್ಟಿ ಧ್ವನಿಯಲ್ಲಿ ಆರ್ಭಟಿಸಿದನು. ಮೊದಲೇ ಟಿವಿಯಲ್ಲಿ ರಾಕ್ಷಸರನ್ನು ಕಂಡು ಅವರ ಬಗ್ಗೆ ಅತಿಯಾಗಿ ಹೆದರಿಕೆ ಬೆಳೆಸಿಕೊಂಡಿದ್ದ ನನಗೆ, ಇವನು ತಿರುವಿನಲ್ಲಿ ಎದುರಾದದ್ದು ಮತ್ತಷ್ಟು ಹೆದರಿಕೆ ಹುಟ್ಟಿಸಿತು. ಒಂದೇ ಸವನೆ ಬೊಬ್ಬೆ ಹಾಕಿದ ನಾನು ಯು ಟೂರ್ನ್ ತೆಗೆದು ಮನೆಯತ್ತ ಕಾಲು ಕಿತ್ತೆ. ಇದರಿಂದ ಗಲಿಬಿಲಿಗೊಂಡ ಬಕಾಸುರ ತನ್ನ ಕತ್ತಿ ಎತ್ತಿಕೊಂಡು ನನ್ನನು ಸಮಾಧಾನ ಮಾಡಲು ನನ್ನ ಹಿಂದೆ ಓಡಿ ಬಂದದ್ದು ಹೇಗಿರಬಹುದೆಂದು ನೀವೇ ಊಹಿಸಿ!

ಈ ಘಟನೆ ನೆನಪಾದದ್ದು ಇವತ್ತು ಬೆಳಿಗ್ಗೆ ಮನೆಯ ಮುಂದೆ ಬಂದು ನಿಂತ ಬಕಾಸುರನನ್ನು ನೋಡಿ. ಕಾಲಕ್ಕೆ ತಕ್ಕ ಕೋಲ ಎನ್ನುವಂತೆ ಕೇವಲ ಬಕಾಸುರನ ಟಾಪ್ ಮಾತ್ರ ಹಾಕಿ ಬಂದವನನ್ನು ಕಂಡು ಓಹ್ ಇದೇನು ಮೊಡರ್ನ ಬಕಸುರನ ಎಂದು ಕೇಳಲು, ಹೌದು ಮೇಡಂ ಫ್ಯಾಷನೆಬಲ್ ಆಗಿದೆ ಅಲ್ವಾ? ಅಂದಾಗ ಮೆಲ್ಲಗೆ ನಕ್ಕು ಹೌದಪ್ಪ ಅಂದೆ.

ನನ್ನ ನಗುವಿನಿಂದ ಕೋಪ ಗೊಂಡವನಂತೆ ಕಂಡ ಮೊಡರ್ನ ಬಕಾಸುರ ‘ಎನ್ ಮೇಡಂ ಹಾಗೆ ನಗ್ತಿರ, ಇದೆಲ್ಲ ನೀರು ಕುಡಿದಷ್ಟು ಸುಲಭ ಅನ್ಕೊಂಡ್ರಾ? ಎಷ್ಟು ಸೆಖೆ ಉಂಟು ಗೊತ್ತುಂಟ? ಬೇಕಾದ ಹಾಗೆ ನದಿ ತಿರುಗಿಸಿ , ಮರ ಕಡಿದು ಪ್ರಕೃತಿ ನಾಶ ಮಾಡಿ ಮತ್ತೆ ಬೊಳ್ಳ(ನೆರೆ) ಬಂತು , ಸೆಖೆ ಜಾಸ್ತಿ ಅಂತೆಲ್ಲ ಅತ್ತರೆ ಎನ್ ಪ್ರಯೋಜನ?’ ಅಂತ ಪಟಪಟನೆ ಹೇಳಿ ಕೊನೆಗೆ ‘ಇನ್ನು ಮುಂದೆ ನೀರು ಕುಡಿದಷ್ಟು ಸುಲಭ ಅಂತ ಹೇಳಲಿಕ್ಕೆ ಸಹ ಉಂಟಾ ಇಲ್ವಾ’🤔 ಅಂತ ಒಂದು ಪಂಚ್ ಲೈನ್ ಸಹ ಬಿಟ್ಟನು.

ಮೊಡರ್ನ ಬಕಾಸುರ ಹೀಗೆ ಒಮ್ಮೆಲೇ ನನ್ನ ಮೇಲೆ ಮಾಡಿದ ಮಾತಿನ ಪ್ರಹಾರದಿಂದ ಬೆಚ್ಚಿಬಿದ್ದ ನಾನು ಇದೆಲ್ಲ ಎಲ್ಲಿಂದ ತಿಳಿದುಕೊಂಡಿರಿ ಅಣ್ಣ ಎಂದರೆ ‘ಅಯ್ಯೋ ಫೇಸ್ಬುಕ್ ವಾಟ್ಸಾಪ್ ಅಲ್ಲಿ ಬರ್ತಾ ಇರ್ತದಲ್ಲ ನೀವು ಓದುದಿಲ್ವಾ?’ ಅಂತ ನಂಗೆ ಕೇಳಿದನು. ಹಾಗಾದರೆ ನಮ್ಮ ಪರಿಸರದಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ಮಾಹಿತಿ, ಎಚ್ಚರಿಕೆ ಎಲ್ಲರಿಗೆ ಇದೆ ಎಂದು ತಿಳಿದು, ಅಲ್ಲ ಇದರ ಬಗ್ಗೆ ನೀವು ಏನಾದರೂ ಕ್ರಮ ಕೈಗೊಂಡಿದ್ದಿರ ಅಂತ ಮರು ಪ್ರಶ್ನೆ ಎಸೆದೆ. ಅದಕ್ಕೆ ಬಕಾಸುರ ಹೌದು ನೆರೆ ಪೀಡಿತರಿಗೆ ನನ್ನ ಕೈಲಾದ ಸಹಾಯ ಮಾಡಿದೆ ಎಂದನು. ಅಲ್ಲಣ್ಣ ನೆರೆ ಬಂದ ಮೇಲೆ ಸಹಾಯ ಮಾಡುವುದಕ್ಕಿಂತ ನೆರೆ ಬರದ ಹಾಗೆ ಮಾಡುವುದು ಮುಖ್ಯ ಅಲ್ವಾ? ಹೀಗೆ ಮುಂದುವರಿದರೆ ಪ್ರತಿ ವರ್ಷ ಇದೆ ಕಥೆ ಅಲ್ವಾ? ಇದರ ಬಗ್ಗೆ ಏನು ಹೇಳುತ್ತಿರಿ ಅಂತ ಕೇಳಿದರೆ ಅವ ‘ಅಯ್ಯೋ ಅದೆಲ್ಲ ನನ್ನ ಒಬ್ಬನಿಂದ ಆಗುದ ಮೇಡಂ, ಅದನ್ನು ನೋಡಿಕೊಳ್ಳಲು ದೊಡ್ಡ ದೊಡ್ಡವರಿದ್ದಾರೆ ಬರ್ತೇನೆ ಮುಂದಿನ ವರ್ಷ!’ ಅನ್ನುತ್ತ ಸರಸರನೆ ಹೆಜ್ಜೆ ಹಾಕಿದ☺️

Days

There are few days when everything seems so right. Everything happens as we expect. We feel like we have complete control of our life. We feel we can change anything as per our wish.

Also there are days when nothing works as expected. Nothing is in favour of us. Everything seems so negative. We feel like nothing is in our control.

Also sometimes it is matter of few seconds. When everything seems impossible, one small positive thing gives us so much strength and confidence that we take everything positively and what was impossible before few seconds becomes a easy task for us .

We say it was a bad day or good day. It is not the day which will be good or bad. It is our mindset which makes things easy or difficult for us. Yes it is not easy to maintain a positive mindset always. But whenever we are feeling low or in a negative zone a small part of our brain should know this is not permanent. No one can be right always. Also no one can be wrong always. There is something positive in everyone. Some people identify and nurture it. Some fail to identify it. I always think if a complete negative person will have atleast slight realisation of their negativity?🤔

Helping hand

When we help someone we should do it from heart and without any expectations. Also when someone helps us we should have it in mind that it is a responsibility on us that someone has trusted on us and our ability. So after accomplishing our goal with that help we should always remember the good deeds of the person who helped us.

I always feel when we get something from someone in the form of help trying to return them the same is meaningless. Eg, someone gave 100rs when you needed it the most 10years back. Today you are a wealthy person and want to return it. It doesn’t make sense returning 100rs to that person today. The time at which the person helped and the situation at which he helped is very important compared to the money you receive. Similarly if someone feeds you when you are hungry feeding them back is not equal to the help they did to you.

Receiving help from someone is a responsibility which should motivate us to help someone else who is in need of it. When someone helps us they do it without any expectations. If we also do the same and help others world will definitely be a better place to live with lots of hope and positivity.

#thought #help #positivity